ಲಕ್ಷ್ಮಿ ಗೋಪಾಲಸ್ವಾಮಿ ದಕ್ಷಿಣ ಭಾರತೀಯ ಚಲನಚಿತ್ರ ನಟಿ ಮತ್ತು ಶಾಸ್ತ್ರೀಯ ನೃತ್ಯಗಾರ್ತಿಯಾಗಿದ್ದು, ಭರತನಾಟ್ಯ ಕಲಾವಿದೆಯಾಗಿದ್ದಾರೆ. ಅವರು ಹಲವಾರು ಮಲಯಾಳಂ, ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಕೆಲವು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರ ವಿದರ್ಶದಲ್ಲಿ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಮಮ್ಮುಟ್ಟಿ ಅವರೊಂದಿಗೆ ನಟಿಸಿದ ಆಕೆಯ ಚೊಚ್ಚಲ ಮಲಯಾಳಂ ಚಿತ್ರ ಅಯ್ಯಣ್ಣನಂಗೊಳ ವೀಡು ದಲ್ಲಿನ ಅಭಿನಯಕ್ಕಾಗಿ ಅವರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟಿ ಎಂದು ಪಡೆದುಕೊಂಡಿದ್ದಾರೆ. ಏಷಿಯನೆಟ್ ನ ವೊಡಾಫೋನ್ ಥಕಧಿಮಿ ನೃತ್ಯ ಪ್ರದರ್ಶನದಲ್ಲಿ ಅವರು ತೀರ್ಪುಗಾರರಾಗಿದ್ದರು. == ಆರಂಭಿಕ ಜೀವನ == ಲಕ್ಷ್ಮಿ ಗೋಪಾಲಸ್ವಾಮಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಎಂ. ಕೆ. ಗೋಪಾಲಸ್ವಾಮಿ ಮತ್ತು ಡಾ. ಉಮಾ ಗೋಪಾಲಸ್ವಾಮಿಯವರ ಕನ್ನಡಿಗ ಕುಟುಂಬದಲ್ಲಿ ಜನಿಸಿದರು. ಅವರು ಅರ್ಜುನ್ ಎಂಬ ಕಿರಿಯ ಸಹೋದರನನ್ನು ಹೊಂದಿದ್ದರು. ಅವರ ತಾಯಿಯು ಸಂಗೀತದ ವಿದ್ವಾಂಸರಾಗಿದ್ದು, ಲಕ್ಷ್ಮಿ ಭರತನಾಟ್ಯದಲ್ಲಿ ವೃತ್ತಿಜೀವನವನ್ನು ಕಲಿಯಲು ಮತ್ತು ಮುಂದುವರಿಸಲು ಪ್ರೇರೇಪಿಸಿದಳು. == ನಟನೆ == 2000 ನೇ ಇಸವಿಯಲ್ಲಿ ಲೋಹಿತಾದಾಸ್ ಅವರು ಬರೆದು ನಿರ್ದೇಶಿಸಿದ ಮಲಯಾಳಂ ಚಿತ್ರ ಅಯ್ಯಣ್ಣನಂಗಲ್ಲು ವೀಡು ಚಲನಚಿತ್ರದಲ್ಲಿ ಮಮ್ಮುಟ್ಟಿ ಅವರೊಂದಿಗೆ ಅವರು ಅಭಿನಯಿಸಿದರು. ಇದಕ್ಕಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಅತ್ಯುತ್ತಮ ಪೋಷಕ ನಟಿಯಾಗಿ ಗಳಿಸಿದರು. 2007 ರಲ್ಲಿ, ಬಾಬು ತಿರುವಲ್ಲಾ ನಿರ್ದೇಶಿಸಿದ ಥಾನಿಯೆ ಮತ್ತು ಪಿ.ಕೆ.ಕುಂಜು ಮೊಹಮ್ಮದ್ ನಿರ್ದೇಶಿಸಿದ ಪರೇಡಿ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಲಕ್ಷ್ಮಿ ಮತ್ತೆ ಎರಡನೇ ಅತ್ಯುತ್ತಮ ನಟಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಅದೇ ಚಲನಚಿತ್ರಗಳಿಗಾಗಿ, ಅವರು ಅತ್ಯುತ್ತಮ ಮಹಿಳಾ ನಟರಿಗೆ "ಅಟ್ಲಾಸ್ ಫಿಲ್ಮ್ ಕ್ರಿಟಿಕ್ಸ್ ಅವಾರ್ಡ್" ಅನ್ನು ಕೂಡಾ ಪಡೆದರು. 2010 ರಲ್ಲಿ, ದಕ್ಷಿಣ ಭಾರತೀಯ ತಾರೆ ವಿಷ್ಣುವರ್ಧನ್ ಎದುರು ಪಿ. ವಾಸು ನಿರ್ದೇಶಿಸಿದ ಅಪ್ತರಕ್ಷಕದಲ್ಲಿ ಅವರು ಪಾತ್ರ ನಿರ್ವಹಿಸಿದರು. ಈ ಕನ್ನಡ ಚಿತ್ರದಲ್ಲಿ, ದುಷ್ಟಶಕ್ತಿ ಹೊಂದಿದ್ದ ನರ್ತಕಿಯಾಗಿ ಅಭಿನಯಿಸಿ ವಿಮರ್ಶಕರಿಂದ ಮತ್ತು ಹಾಜರಿದ್ದ ಸಾರ್ವಜನಿಕರಿಂದ ಪ್ರಶಂಸಿಸಲ್ಪಟ್ಟರು. ಈ ಚಲನಚಿತ್ರವು ಮೆಗಾ ಹಿಟ್ ಆಗಿ ಹೊರಹೊಮ್ಮಿತು ಮತ್ತು ಚಿತ್ರಮಂದಿರಗಳಲ್ಲಿ ನಿರಂತರವಾಗಿ 35 ವಾರಗಳ ಕಾಲ ನಡೆಯಿತು; ಇದು ವಿಷ್ಣುವರ್ಧನ್ ಅವರ ಕೊನೆಯ ಕನ್ನಡ ಚಿತ್ರವಾಗಿತ್ತು. ವಿಷ್ಣುವರ್ಧನ್ ಚಲನಚಿತ್ರಗಳಾದ ವಿಷ್ಣು ಸೇನಾ ಮತ್ತು ನಮ್ಮೆಜಮಾನ್ರುಗಳಲ್ಲಿ ನಟಿಸಿದ್ದಾರೆ. ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿದ ಲಕ್ಷ್ಮಿ, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, "ನನ್ನ ಅಭಿನಯಕ್ಕಾಗಿ ಪ್ರೇಕ್ಷಕರಿಂದ ನಾನು ಪಡೆಯುತ್ತಿರುವ ಪ್ರತಿಕ್ರಿಯೆಗೆ ನಾನು ತೃಪ್ತಿ ಹೊಂದಿದ್ದೇನೆ. ನನಗೆ ವಿಷ್ಣುಜಿಯೊಂದಿಗೆ ಅಭಿನಯಿಸಲು ತುಂಬ ಇಷ್ಟ." ಲಕ್ಷ್ಮಿ ಎಂಬ ಹೆಸರಿನ ತಮಿಳು ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಿದ್ದಾರೆ ಮತ್ತು ಪ್ರಶಂಸೆಯನ್ನು ಪಡೆದಿದ್ದಾರೆ. ಮಲಯಾಳಂ ಸಿನೆಮಾದಲ್ಲಿ ಅವರ ಯಶಸ್ಸು ಕೂಡ ತನ್ನ ಸ್ಥಳೀಯ ಕನ್ನಡ ಚಲನಚಿತ್ರೋದ್ಯಮದಿಂದ ತನ್ನ ಕೊಡುಗೆಗಳನ್ನು ಪಡೆದುಕೊಂಡಿದೆ. ಅವರ ಚೊಚ್ಚಲ ಮಲಯಾಳಂ ಚಿತ್ರ ಅರಯಣ್ಣಂಗಲ್ಲು ವೀಡುವಿನ್ಲಲಿನ ಅವರ ನಟನೆಗೆ ಅತ್ಯುತ್ತಮ ಪೋಷಕ ನಟಿಗಾಗಿ ಕೇರಳ ರಾಜ್ಯ ಪ್ರಶಸ್ತಿ ದೊರಕಿತು. ಅವರ ಎರಡನೆಯ ಚಲನಚಿತ್ರ ಕೊಚು ಕೋಚು ಸಂತೋಂಗಾಂಗಲ್ ಸಹ ನಟನೆಗೆ ಹೆಚ್ಚಿನ ಪ್ರಶಂಸೆಯನ್ನು ಪಡೆಯಿತು. ಅಭಿನಯ ಅವರಿಗೆ ಬೇರೆ ರೀತಿಯ ಅಭಿವ್ಯಕ್ತಿಯನ್ನು ಒದಗಿಸಿತು. "ಪ್ರಾರಂಭದಲ್ಲಿ ನಾನು ಈ ವೃತ್ತಿಯಲ್ಲಿ ಭೀತಿಗೊಳಗಾಗಿದ್ದೆ, ನಾನು ಪ್ರಸಿದ್ಧಿ ಪಡೆಯಲು ತುಂಬಾ ನಾಚಿಕೆಸ್ವಭಾವದವಳಾಗಿದ್ದೆ" ಎಂದು ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಶೀಘ್ರದಲ್ಲೇ ಈ ವೃತ್ತಿಗೆ ಒಗ್ಗಿಕೊಂಡರು. == ನೃತ್ಯ == ನೃತ್ಯ ಯಾವಾಗಲೂ ತನ್ನ ನೆಚ್ಚಿನ ವೃತ್ತಿಯಾಗಿರುತ್ತದೆ ಎಂದು ಅವರು ಹೇಳುತ್ತಾರೆ; ಅವರು ಅರೆ ಶಾಸ್ತ್ರೀಯ ನೃತ್ಯ-ಹಾಡುಗಳನ್ನು ಹೊಂದಿದ ಕೊಚ್ಚು ಕೊಚ್ಚು ಸಂತೋಶಂಗಲ್ ನಂತಹ ಚಲನಚಿತ್ರಗಳಲ್ಲಿ ಉತ್ತಮ ಪಾತ್ರಗಳನ್ನು ಪ್ರೀತಿಸುತ್ತಾರೆ. ಚಲನಚಿತ್ರ ಜಗತ್ತಿನಲ್ಲಿ ಅವರ ಸ್ಟಾರ್ ಸ್ಥಾನಮಾನದ ಹೊರತಾಗಿಯೂ, ಅವರು ಉನ್ನತ-ಶ್ರೇಣಿಯ ನರ್ತಕಿಯಾಗಿ ರೂಪಾಂತರಗೊಳ್ಳುವ ಬಗ್ಗೆ ಕನಸು ಕಾಣುತ್ತಾರೆ. == ಪ್ರಶಸ್ತಿಗಳು == ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು: 2000: ಎರಡನೇ ಅತ್ಯುತ್ತಮ ನಟಿಗಾಗಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ - ಅರಯನಂಗಲು ವೀಡು 2007: ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್ ಫಾರ್ ಸೆಕೆಂಡ್ ಬೆಸ್ಟ್ ಆಕ್ಟ್ರೆಸ್ - ಥೈನ್ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 2014: ವಿಡಾಯಕ್ಕಾಗಿ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದಕ್ಷಿಣದ ಫಿಲ್ಮ್ಫೇರ್ ಪ್ರಶಸ್ತಿಗಳು 2007: ಅತ್ಯುತ್ತಮ ಪೋಷಕ ನಟಿ - ಪರದೇಶ ಏಷ್ಯನ್ನೆಟ್ ಚಲನಚಿತ್ರ ಪ್ರಶಸ್ತಿಗಳು 2001 - ಅತ್ಯುತ್ತಮ ಮಹಿಳಾ ಚೊಚ್ಚಲ - ಅರಯನಂಗಲುಡು ವೀಡು ಕೇರಳ ಚಲನಚಿತ್ರ ವಿಮರ್ಶಕರ ಪ್ರಶಸ್ತಿಗಳು 2007: ಅತ್ಯುತ್ತಮ ನಟಿ - ಥೈನ್ 2016: ವಿಶೇಷ ತೀರ್ಪುಗಾರ ಪ್ರಶಸ್ತಿ - ಕಾಂಬೊಜಿ ಜೈಹೈಂಡ್ ಟಿವಿ ಪ್ರಶಸ್ತಿಗಳು 2007: ಅತ್ಯುತ್ತಮ ಪೋಷಕ ನಟಿ - ಪರೇಡಿ ಮತ್ತು ಥೈನ್ == ಚಲನಚಿತ್ರಗಳು == == ಕಿರುತೆರೆ == ಅವರು ಪ್ರಪಂಚದಾದ್ಯಂತ ವಿವಿಧ ವೇದಿಕೆಗಳಲ್ಲಿ ತನ್ನ ನೃತ್ಯ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅವರು ಅನೇಕ ಜಾಹೀರಾತುಗಳಲ್ಲಿ ವಿಶೇಷವಾಗಿ ಮಲಯಾಳಂ ಭಾಷೆಯಲ್ಲಿ ಕಾಣಿಸಿಕೊಂಡಿದ್ದಾರೆ. == ==